ಚಂದನವನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶಾರೀರಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಅವರ ನೆನಪು, ಅವರ ಸಮಾಜ ಸೇವೆಗಳು ಇನ್ನು ಜನಮಾನಸದಲ್ಲಿ ಅಜರಾಮರ. ಅಪ್ಪು ಇಲ್ಲದ ಜನ್ಮ ದಿನೋತ್ಸವವನ್ನು ಅಭಿಮಾನಿಗಳು ವಿಭಿನ್ನ ರೀತಿ ಆಚರಿಸಿಕೊಂಡು ಬಂದಿದ್ದಾರೆ. ಈ ನಡುವೆ ಚಿತ್ರ ತಂಡವೊಂದು ತಮ್ಮ ಸಿನಿಮಾದಲ್ಲಿ ಅಪ್ಪುವಿಗಾಗಿಯೇ ಒಂದು ಹಾಡು ಮೀಸಲಿಟ್ಟು ಹಾಡಿನ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.
ಬಿ ವಿ ಎಂ ಪ್ರೋಡ್ಯೂಕ್ಷನ್ಸ್ ಲಾಂಛನದಲ್ಲಿ ಮಹಿ ಶಿವಶಂಕರ್ ಎನ್ನುವವರು ಪುನೀತ್ ರಾಜಕುಮಾರ್ ಅವರ ಮೇಲಿನ ಅಭಿಮಾನಕ್ಕಾಗಿ “ಅಪ್ಪು ಕಥಾ ಗಾನಂ” ಎನ್ನುವ ಶೀರ್ಷಿಕೆಯಡಿ ಹಾಡೊಂದನ್ನು ನಿರ್ಮಾಣ ಮಾಡಿದ್ದಾರೆ. ಈ ಹಾಡು ಕನ್ನಡ ಹಾಗು ತೆಲುಗು ಅವತರಣಿಕೆಯಲ್ಲಿದ್ದು, ಕನ್ನಡದಲ್ಲಿ ರಾಜೇಶ್ ಕೃಷ್ಣನ್ ಹಾಗು ಜಯಶ್ರೀ ಹಾಡಿದ್ದಾರೆ. ಗೋಪಿ ಶೀಗೇಹಳ್ಳಿ ಸಾಹಿತ್ಯವಿರುವ ಈ ಹಾಡಿಗೆ ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ಮಹಿ ಶಿವಶಂಕರ್ ಅವರು ಈ ಹಾಡನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ, ತಮ್ಮ ಮುಂಬರುವ ಚಿತ್ರದಲ್ಲಿ ಈ ಹಾಡು ಬಳಸುವುದಾಗಿ ಹೇಳಿದರು.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...