ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಆಗಲಿ ವರ್ಷಗಳೇ ಆದರೂ, ಅಸಂಖ್ಯಾತ ಅಭಿಮಾನಿಗಳಲ್ಲಿ ದುಃಖ ಇಮ್ಮಡಿಗೊಂಡಿದೆ.. ಕಾರಣ ಮತ್ತೆ ಕೋರ್ಟ್ಗೆ ಮೊರೆ ಹೋದ ನಟ ದಿವಂಗತ ಬಾಲಕೃಷ್ಣ ಕುಟುಂಬಸ್ಥರು. ಹಲವು ವರ್ಷಗಳಿಂದ ವಿಷ್ಣುವರ್ಧನ್ ಸಮಾಧಿಯ ಬಗ್ಗೆ ಎರಡು ಕುಟುಂಬಸ್ಥರಲ್ಲಿ ಹಗ್ಗ ಜಗ್ಗಾಟ ನಡೆಯುತ್ತಲೇ ಬಂದಿದ್ದು ಕಳೆದ ಎರಡು ವರ್ಷದ ಹಿಂದ ವಿಷ್ಣುವರ್ಧನ್ ಕುಟುಂಬ ಅಭಿಮಾನ್ ಸ್ಟುಡಿಯೋದಲ್ಲಿ ಆಗಬೇಕಿದ್ದ ಡಾ|| ವಿಷ್ಣುವರ್ಧನ್ ಸ್ಮಾರಕವನ್ನು ಮೈಸೂರಿನ ಹೆಚ್ ಡಿ ಕೋಟೆಯ ಬಳಿ ಸ್ಥಳಾಂತರಗೊಳಿಸಿದ್ದು ನಮಗೆ ಗೊತ್ತಿರುವ ಸಂಗತಿ.
ಆದರೆ ಈಗ ಬಾಲಕೃಷ್ಣ ಕುಟುಂಬಸ್ಥರು ಮತ್ತೆ ಸುದ್ಧಿಯಲ್ಲಿದ್ದಾರೆ, ಕಾರಣ ಮೈಸೂರಿಗೆ ಸ್ಮಾರಕ ಸ್ಥಳಾಂತರಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ಈಗಿರುವ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವುಗೊಳಿಸಲು ಕೋರ್ಟ್ ಬಾಗಿಲು ತಟ್ಟಿದ್ದು. ಈ ಬಗ್ಗೆ ಅನಿರುದ್ಧ ನೊಂದು ಬರೆದಿದ್ದರು.
“ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಇತ್ಯಾದಿ ಮಾಡಿಕೊಂಡು ಬರಲಿ, ನಮಗೆ ಯಾವತ್ತೂ ಅಭ್ಯಂತರ ಇರಲಿಲ್ಲ, ಇರೋದೂ ಇಲ್ಲ. ಇದ್ದಿದ್ದರೆ ಅಭಿಮಾನಿಗಳಿಗೆ ಇಷ್ಟು ವರ್ಷ ಪೂಜೆ ಇತ್ಯಾದಿ ಮಾಡಿಕೊಂಡು ಬರೋದಕ್ಕೆ ಅವಕಾಶಾನೇ ಸಿಗುತ್ತಿರಲಿಲ್ಲ. ನಮ್ಮ ಅಭ್ಯಂತರ ಇಲ್ಲ ಅಂದಮೇಲೆ ನಮ್ಮ ಅನುಮತಿ ಯಾತಕ್ಕೆ? ಅನುಮತಿ ಕೊಡಬೇಕಾಗಿರೋದು ಬಾಲಣ್ಣರವರ ಮಕ್ಕಳು ಅಭಿಮಾನಿಗಳಿಗೆ. ಅಭಿಮಾನಿಗಳೇ! ಅವರ ಅನುಮತಿ ಪಡೆದುಕೊಳ್ಳಿ, ನೆನಪಿಡಿ ಅದು ಅವರ ಜಾಗ, ಎಲ್ಲಾ ಸಮಸ್ಯೆ ಬಗೆಹರಿಯತ್ತೆ. ಹಾಗೇನೆ ನಾವು ಯಾವತ್ತು ಕೂಡ ಅದು ತೆರವು ಆಗೋದಕ್ಕೆ ಬಯಸಲಿಲ್ಲ, ಬಯಸೋದೂ ಇಲ್ಲ. ಆದರೆ ಬಾಲಣ್ಣರವರ ಕುಟುಂಬದವರ ಅಪೇಕ್ಷೆ ಈಗ ಏನು? 10 ಗುಂಟೆ ಅವತ್ತು ಯಾಕೆ ಕೊಡಲಿಲ್ಲ? 6 1/2 ವರ್ಷಗಳು ಕೇಳಿ, ಕೇಳಿ, ಎಷ್ಟೇ, ಹೇಗೆೇ ಪ್ರಯತ್ನ ಪಟ್ಟರೂ, ಆಗ ಅವರು ಮನಸ್ಸು ಮಾಡಲಿಲ್ಲ, ಅಪ್ಪಾವರನ್ನ, ಅಮ್ಮಾವರನ್ನ ಅವಮಾನ ಮಾಡಿದ್ದಾರೆ. ಕೊನೆಗೆ ಸರಕಾರನೇ ಬೇರೆ ಕಡೆ ಮಾಡಿ ಅಂತ ಹೇಳಿದಮೇಲೆ ನಾವು ನಿರ್ಧಾರ ತೆಗೆದುಕೊಳ್ಳೇ ಬೇಕಾಯಿತು.…ತುಂಬಾ ನೊಂದುಕೊಂಡಿದ್ದೇವೆ. ಸಾಕಷ್ಟು ಸಂಘರ್ಷಗಳನ್ನು ಎದುರಿಸಿದ್ದೇವೆ. ಹೋರಾಡಿದ್ದೇವೆ…ನಮ್ಮ ಪ್ರಯತ್ನಗಳ ಬಗ್ಗೆ, ಶ್ರಮ, ಶ್ರದ್ಧೆ, ಪ್ರೀತಿ, ಕಾಳಜಿ ಬಗ್ಗೆ ದಯಮಾಡಿ ಪ್ರಶ್ನೆಗಳನ್ನು ಎತ್ತಬೇಡಿ ಎಂದು ಅಭಿಮಾನಿಗಳಿಗೆ ಅನಿರುದ್ಧ್ ಮನವಿ ಮಾಡಿದ್ದಾರೆ.
ಇಂದಿನಿಂದ ಸುವರ್...
Veda Krishnamurthy visits Hoysala film s...
ಮರಳಿ ಬರಲಿದೆಯಾ ...
Bangalore Boys - hero first-look poster ...
ಪೆಂಟಗಾನ್ ವಿರುದ...
'Driver Jamuna' trailer released by Kish...
ಅದ್ದೂರಿಯಾಗಿ ನಡ...
Dhananjay's Jamaligudda posters revealed
ಶ್ರುತಿ ತಂಗಿ ಮಗ...
'Shava Samskara' teaser released