ಹುಲಿಯೂರು ದುರ್ಗದಲ್ಲಿ 2015 ರಿಂದ 2019ರ ನಡುವೆ ನಡೆದ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಹಾರರ್, ಥ್ರಿಲ್ಲರ್ ಚಿತ್ರ ಡಿಸೆಂಬರ್ 24. ಭಾಗ್ಯಲಕ್ಷ್ಮಿ ಖ್ಯಾತಿಯ ಭೂಮಿಕಾ ರಮೇಶ್ ನಾಯಕಿಯಾಗಿ ನಟಿಸಿರುವ, ಎಂ.ಜಿ.ಎನ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಟ್ರೈಲರ್ ಲಾಂಚ್ ಮಾಡಿ ಹಳ್ಳಿಯ ರೈತರ ಮಕ್ಕಳು ಸೇರಿ ಒಳ್ಳೆಯ ಕಾನ್ಸೆಪ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ನಾನು ಸಿನಿಮಾ ನೋಡಿದ್ದೇನೆ, ಚೆನ್ನಾಗಿ ಬಂದಿದೆ ಎಂದರು.
ಸಾಂಗ್ ರಿಲೀಸ್ ಮಾಡಿದ ನಿರ್ದೇಶಕ ಮಾ.ಚಂದ್ರು ಮಾತನಾಡಿ, ಈ ಹಾಡಿಗೂ ನಿರ್ದೇಶಕರಿಗೂ ಹತ್ತಿರದ ಸಂಬಂಧವಿದೆ. ಅವರ ಫ್ಯಾಮಿಲಿಯಲ್ಲೂ ಇಂಥದ್ದೊಂದು ಇನ್ಸಿಡೆಂಟ್ ನಡೆದಿದೆ. ಅಲ್ಲದೆ ಸಿನಿಮಾ ರಿಲೀಸಿಗೂ ಮುಂಚೆಯೇ 5 ಸಾವಿರ ಟಿಕೆಟ್ ಸೇಲ್ ಮಾಡಿದ್ದಾರೆ ಎಂದರು.
ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರ ಮಾಡಿರುವ ಆನಂದ್ ಪಟೇಲ್ ಹುಲಿಕಟ್ಟೆ ಮಾತನಾಡಿ ಮೆಣಸಿನಕೆರೆದೊಡ್ಡಿ ಎಂಬ ಕುಗ್ರಾಮದಿಂದ ಬಂದ ನಾಗರಾಜ್ ಗೌಡ ಒಂದು ಸಾಮಾಜಿಕ ಕಳಕಳಿಯಿರುವ ಸಿನಿಮಾ ಮಾಡಿದ್ದಾರೆ. ನಮಗೂ ಒಂದು ಪಾತ್ರಕೊಟ್ಟಿದ್ದಾರೆ ಎಂದರು. ನಟ ಅನಿಲ್ ಗೌಡ್ರು ಮಾತನಾಡಿ ಬದಲಾದ ಜೀವನಶೈಲಿಯಲ್ಲಿ ಹುಟ್ಟಿದ ಮಕ್ಕಳು ಯಾವರೀತಿ ಸಾವನ್ನಪ್ಪುತ್ತಾರೆ ಎಂಬುದನ್ನು ಅವರಿಗಾದ ಅನುಭವ ಇಟ್ಟುಕೊಂಡು ಶೂಟ್ ಮಾಡಿದ್ದಾರೆ. ಫಾರೆಸ್ಟ್ ನಲ್ಲಿ ಮಳೆ ಇದ್ದರೂ ಚಿತ್ರೀಕರಣ ಮಾಡಿದ್ದಾರೆ. ನನ್ನದು ನೆಗೆಟಿವ್ ಪಾತ್ರ ಎಂದರು. ಛಾಯಾಗ್ರಾಹಕ ವಿನಯ್ ಗೌಡ ಮಾತನಾಡಿ ಫಾರೆಸ್ಟ್ ನಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಿದ್ದೇವೆ. ಎಂದರು.
Also Read : December-24 Film Teaser released by Kodihalli Chandrashekar
ನಾಗರಾಜ್ ಗೌಡ ಮಾತನಾಡಿ ಕೇವಲ 500ರೂ. ಇಟ್ಟುಕೊಂಡು ಈ ಸಿನಿಮಾ ಆರಂಭಿಸಿದೆ. ಈಗ 80 ಲಕ್ಷ ಆಗಿದೆ. ಒಬ್ಬ ನಿರ್ಮಾಪಕರು ಕೊಡುತ್ತೇನೆ ಎಂದು ಭರವಸೆ ನೀಡಿ ಬಿಟ್ಟುಬಿಟ್ಟರು. ಮೆಡಿಕಲ್ ರೀಸರ್ಚ್ ಗೂ ಡಿಸೆಂಬರ್ 24ಕ್ಕೂ ಏನು ಲಿಂಕ್ ಅಂತ ಹೇಳೋದೇ ಈ ಚಿತ್ರ. ಮಾರ್ಸ್ ಸುರೇಶ್ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ ಎಂದರು.
ನಾಯಕಿ ಭೂಮಿಕಾ ರಮೇಶ್ ಮಾತನಾಡಿ ಬೇಸಿಕಲಿ ನಾನು ಡಾನ್ಸರ್. ಪುನೀತ್ ಅವರ ಜೊತೆ ಅಭಿನಯಿಸಬೇಕೆಂಬುದು ನನ್ನ ಕನಸಾಗಿತ್ತು. ಕಾವ್ಯ ಎಂಬ ಮೆಡಿಕಲ್ ಸ್ಟೂಡೆಂಟ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಫ್ರೆಂಡ್ಷಿಪ್ಗೆ ಹೆಚ್ಚು ಪ್ರಾಮುಖ್ಯತೆ ಇರುವ ಕಥೆ ಇದರಲ್ಲಿದ್ದು, ಈ ಚಿತ್ರದಿಂದ ನಾನು ತುಂಬಾ ಕಲಿತಿದ್ದೇನೆ. ಅಭಿನಯ ಏನೆಂದು ಹೇಳಿಕೊಟ್ಟಿದ್ದೇ ನಾಗರಾಜ್ ಅವರು. ಅಜಯ್ ಎನ್ನುವ ವ್ಯಕ್ತಿಯ ಮನೆಯಲ್ಲಿ ನಡೆದ ಘಟನೆಯಿಂದ ಆತನ ಸ್ನೇಹಿತರಾದ ನಾವೆಲ್ಲ ಅದಕ್ಕೆ ಮೆಡಿಸಿನ್ ಹುಡುಕಿಕೊಂಡು ಕಾಡಿಗೆ ಹೋಗುತ್ತೇವೆ. ಅಲ್ಲಿ ನಡೆಯುವ ಘಟನೆಗಳೇ ಚಿತ್ರದ ಮುಖ್ಯ ಕಥಾವಸ್ತು. ರೆಸ್ಪಿರೇಟರಿ ಇಶ್ಯೂ ಮೇಲೆ ಮಾಡಿದಂಥ ಕಥೆಯಿದು ಎಂದರು. ಉಳಿದಂತೆ ನಾಯಕ ಅಪ್ಪು ಬಡಿಗೇರ್, ರವಿ ಕೆಆರ್.ಪೇಟೆ, ಜಗದೀಶ್ , ದಿವ್ಯ ಆಚಾರ್, ಸಾಗರ್ ಎಲ್ಲರೂ ತಂತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ಬೆಂಗಳೂರು, ಸಕಲೇಶಪುರ, ಹುಲಿಯೂರು ದುರ್ಗ ಹಾಗೂ ದಾಂಡೇಲಿ ಫಾರೆಸ್ಟ್ ಸುತ್ತಮುತ್ತ ಸುಮಾರು 60 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ರಘು ಎಸ್. ಅವರ ನಿರ್ಮಾಣದ ಈ ಚಿತ್ರಕ್ಕೆ ಮಂಜು ಡಿ.ಟಿ., ಸಿದ್ದಮ್ಮ ಕಂಬಾರ್, ಮಹಂತೇಶ್ ನೀಲಪ್ಪ ಚೌಹಾಣ್ ಹಾಗೂ ವಿ.ಬೆಟ್ಟೇಗೌಡ ಅವರ ಸಹ ನಿರ್ಮಾಣವಿದೆ. ಈ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿ.ನಾಗೇಂದ್ರಪ್ರಸಾದ್, ವಿಶಾಲ್ ಆಲಾಪ್ ಹಾಗೂ ಗೀತಾ ಆನಂದ್ ಪಟೇಲ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದಲ್ಲಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ, ಸಾಗರ್ ಐವರು ಸ್ನೇಹಿತರಾಗಿ ನಟಿಸಿದ್ದಾರೆ.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...