ಇದು ಚಲನಚಿತ್ರದಲ್ಲಿ ನಟಿಸಲು ಬಯಸುವವರಿಗೆ ಫಿಸಿಕಲ್ ಫಿಟ್ನೆಸ್ ಮತ್ತು ಸೆಲ್ಫ್ ಡಿಫೆನ್ಸ್ ಕುರಿತು ಶಿಕ್ಷಣ ನೀಡುವ ಸಂಸ್ಥೆ
ಪ್ರತಿಯೊಬ್ಬ ಮನುಷ್ಯನು ತಾನು ದೈಹಿಕವಾಗಿ ಆರೋಗ್ಯವಾಗಿರಬೇಕೆಂದು ಬಯಸುತ್ತಾನೆ. ಅದರಲ್ಲೂ ಸಿನಿಮಾದಲ್ಲಿ ನಟಿಸಬೇಕೆಂಬ ಆಸಕ್ತಿ ಇರುವವರಿಗಂತೂ ಫಿಸಿಕಲ್ ಫಿಟ್ನೆಸ್ ಬಹು ಮುಖ್ಯ. ಇದರ ಬಗ್ಗೆ ಸರಿಯಾದ ಶಿಕ್ಷಣ ನೀಡಲು ಬೆಂಗಳೂರಿನ ಹೃದಯ ಭಾಗವಾದ ಗಾಂಧಿ ಬಜಾರ್ನಲ್ಲಿ ‘Combat warriors’ ಎಂಬ ಸಂಸ್ಥೆ ಆರಂಭವಾಗಿದೆ. ಇತ್ತೀಚೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಗ್ರ್ಯಾಂಡ್ ಮಾಸ್ಟರ್ ಎಂ ಹೆಚ್ ಅಬೀದ್, ‘ನಾನು ಈ ತನಕ ದೇಶ ಹಾಗೂ ವಿದೇಶಗಳಲ್ಲಿ ಚಿತ್ರನಟರ ಉದ್ಯಮಿಗಳು, ಪೊಲೀಸ್ ಇಲಾಖೆಯವರು ಹೀಗೆ ಸಾಕಷ್ಟು ಜನರಿಗೆ ಫಿಸಿಕಲ್ ಫಿಟ್ನೆಸ್ ಹಾಗೂ ಸೆಲ್ಫ್ ಡಿಫೆನ್ಸ್ ಬಗ್ಗೆ ತರಭೇತಿ ನೀಡಿದ್ದೇನೆ. 1983ನೇ ಇಸವಿಯಲ್ಲಿ ಸಾಹಸ ಸಿಂಹ ಡಾ||ವಿಷ್ಣುವರ್ಧನ್ ಅವರಿಗೆ ಬ್ಲ್ಯಾಕ್ ಬೆಲ್ಟ್ ತರಬೇತಿ ಸಹ ನೀಡಿದ್ದೆ. ಈಗ ಬೆಂಗಳೂರಿನ ಗಾಂಧಿಬಜಾರ್ ನಲ್ಲಿ ನಮ್ಮ ಸಂಸ್ಥೆಯನ್ನು ಆರಂಭಿಸಿದ್ದೇವೆ. ಆಸಕ್ತಿಯಿರುವ ಯುವಜನತೆ, ಮಹಿಳೆಯರು ಹಾಗೂ ಮಕ್ಕಳು ಉಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
Also Read : Fitness Education for acting aspirants by Combat Warriors
‘ನಾನು ಶಿವಮೊಗ್ಗದ ಬಳಿಯ ಸಣ್ಣ ಹಳ್ಳಿಯಿಂದ ಬಂದಿದ್ದೇನೆ. ಬಾಲ್ಯದಲ್ಲಿ ನಮ್ಮ ಹಳ್ಳಿಯಿಂದ ಶಾಲೆಗೆ ನಾವು ನಾಲ್ಕು ಜನ ಮಕ್ಕಳು ಹೋಗುತ್ತಿದ್ದೆವು. ಕೆಲವೊಮ್ಮೆ ಭಯವಾಗುತ್ತಿತ್ತು. ಆಗ ನಾನು ಸೆಲ್ಫ್ ಡಿಫೆನ್ಸ್ ಬಗ್ಗೆ ತಿಳಿದುಕೊಳ್ಳಬೇಕೆಂದು ತೀರ್ಮಾನಿಸಿದೆ. ಆನಂತರ ಅಬೀದ್ ಅವರ ಬಳಿ ಕಲಿತೆ. ಹೆಣ್ಣುಮಕ್ಕಳು ತಾವು ಕಷ್ಟಕ್ಕೆ ಸಿಲುಕಿಕೊಂಡಾಗ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಮಕ್ಕಳು ಸಹ. ಈ ಕುರಿತು ನಮ್ಮ ‘Combat warriors’ ಸಂಸ್ಥೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸೆಲ್ಫ್ ಡಿಫೆನ್ಸ್ ಬಗ್ಗೆ ಉತ್ತಮ ಶಿಕ್ಷಣ ನೀಡುತ್ತೇವೆ’ ಎಂದು ‘Combat warriors’ ಸಂಸ್ಥೆಯ ಟ್ರೈನ್ಡ್ ಇನ್ಸ್ ಟ್ರಾಕ್ಟರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪ್ರಿಯಾಂಕ ಬಿ.ಎಸ್ ತಿಳಿಸಿದರು. ಇತ್ತೀಚಿಗೆ ನಡೆದ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಎಂ.ಹೆಚ್ ಅಬೀದ್, ಮ್ಯಾನೇಜಿಂಗ್ ಡೈರೆಕ್ಟರ್ ಪ್ರಿಯಾಂಕ, ಮಿಸ್ಟರ್ ಫರ್ಹಾನ್ ಭಾನು (ಭಾರತದ ಮಹಿಳಾ ಆಯೋಗದ ಮುಖ್ಯಸ್ಥರು), ರಾಧಾಕೃಷ್ಣ ಹೊಳ್ಳ (ನ್ಯಾಯಮೂರ್ತಿ), ಅನೀಸ್ ಸಿರಾಜ್ (ವೈದ್ಯ ಅಧಿಕಾರಿ), ಸರ್ವರ್ (ಬಾಲಿವುಡ್ ನಟ) ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...