ಸದ್ಯದಲ್ಲೇ ವಿವಾಹ ಜೀವನಕ್ಕೆ ಒಳಗಾಗುತ್ತಿರುವ ತಾರಾ ಜೋಡಿ ಹರಿಪ್ರಿಯಾ ಹಾಗು ವಶಿಷ್ಠ ಸಿಂಹ ಇಂದು ಪತ್ರಕರ್ತರನ್ನು ಭೇಟಿ ನೀಡಿ ಇದೆ ತಿಂಗಳ 26 ರಂದು ನಡೆಯುವ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಕಳೆದ ಎರಡು ತಿಂಗಳಿಂದ ಪತ್ರಕರ್ತರ ಕೈಗೆ ಸಿಗದೇ ಇದ್ದದ್ದಕ್ಕೆ ಕ್ಷೇಮೆ ಕೇಳಿ ಮಾತು ಆರಂಭಿಸಿದ ನಟ ಸಿಂಹ ಲವ್ ಮ್ಯಾರೇಜ್ ಒಂಥರಾ ಅರೆಂಜ್ ಮ್ಯಾರೇಜ್ ಆಗಿಬಿಟ್ಟಿದೆ. ನಮ್ಮ ಪ್ರೀತಿ ಬಗ್ಗೆ ವಿಷಯ ಹೇಳಿಕೊಳ್ಳೋಣ ಅಂದ್ರೆ ಟೈಮ್ ಸಿಕ್ತಿರ್ಲಿಲ್ಲ. ಹೇಗೋ ವಿಷಯ ಹರಡಿ.. ನೀವು ಬರೆದು. ಇನ್ನೇನು ಹೇಳಿಕೊಳ್ಳೋದು ಅಂತ ಇದ್ವಿ. ಈ ಮದ್ಯೆ ಸಿನಿಮಾ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ವಿ. ನಾವು ಏನೂ ಅಲ್ಲದ ದಿನಗಳಲ್ಲೂ ನಮ್ಮ ಜೊತೆಯಾಗಿ ನಿಂತವರು ನೀವು. ನಮ್ಮ ಬಗ್ಗೆ ಬರೆದ್ರಿ. ನಮ್ಮ ಕೆಲಸ ಮೆಚ್ಚಿದ್ರಿ. ಇದು ನೀವು ನಮಗೆ ಕೊಟ್ಟಿರೋ ಪ್ರೀತಿ. ನಮ್ಮ ಮದುವೆಗೆ ಮಾದ್ಯಮದವರಲ್ಲದೆಯೇ ಬಂದುಗಳಾಗಿ ಬಂದು ಹಾರೈಸಿ ಎಂದು ಸಿಂಹ ಪ್ರಿಯ ಜೋಡಿ ಕೇಳಿಕೊಂಡರು.
ಇದೆ 26 ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಹರಿಪ್ರಿಯಾ ಹಾಗು ವಶಿಷ್ಠ ಸಿಂಹ ಜೋಡಿ ಕಾಲಿಡುತ್ತಿದ್ದಾರೆ. 28 ರಂದು ಬೆಂಗಳೂರಿನ ಗೋಲ್ಡನ್ ಪಾಲ್ಮ್ಸ್ ರೆಸಾರ್ಟ್ಸ್ ಅಲ್ಲಿ ಚಂದನವನದವರಿಗಾಗಿ ಅದ್ದೂರಿ ಆರತಕ್ಷತೆ ಆಯೋಜಿಸಿದ್ದಾರೆ.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...