ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೆಸಿಸಿ ಕಪ್ (ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ) ಈ ವರ್ಷ ಸೀಸನ್ 4 ಮೂಲಕ ಮತ್ತೆ ಬರಲಿದೆ ಎನ್ನಲಾಗಿದೆ!. ಕೋವಿಡ್ ಬಿಕ್ಕಟ್ಟು ಕಾಣಿಸಿಕೊಂಡ ಮೊದಲು, 2019 ರಲ್ಲಿ ಮೈಸೂರಿನಲ್ಲಿ ನಡೆದ ಮೂರನೇ ಸೀಸನ್ ಟೂರ್ನಿ ಕೊನೆಯ ಈವೆಂಟ್ ಆಗಿತ್ತು. ಮುಂಬರುವ ದಿನಗಳಲ್ಲಿ ಈ ಟೂರ್ನಿಯ ಕುರಿತು ಹೆಚ್ಚಿನ ವಿವರಗಳೊಂದಿಗೆ ಕಪ್ ಬಗ್ಗೆ ತಿಳಿಸಿಕೊಡಲು ಅದ್ದೂರಿ ಕಾರ್ಯಕ್ರಮವನ್ನು ಸಂಘಟಕರು ಯೋಜಿಸುತ್ತಿದ್ದಾರೆ. ಕನ್ನಡ ಚಲನಚಿತ್ರ ಕಪ್ ನ ಹಿಂದಿನ ಎಲ್ಲಾ ಮೂರು ಸರಣಿಗಳ ಯಶಸ್ಸಿನ ಹಿಂದಿನ ವ್ಯಕ್ತಿ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್. ಅವರ ಪ್ರಯತ್ನದಿಂದ ಸಿನಿಮಾ ಸೆಲೆಬ್ರಿಟಿಗಳು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರು ಒಟ್ಟಾಗಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
2019 ರಲ್ಲಿ ನಡೆದ KCC ಈವೆಂಟ್ನಲ್ಲಿ ರಾಷ್ಟ್ರಕೂಟ ಪ್ಯಾಂಥರ್ಸ್, ಗಂಗಾ ವಾರಿಯರ್ಸ್, ಕದಂಬ ಲಯನ್ಸ್, ಹೊಯ್ಸಳ ಈಗಲ್ಸ್, ಒಡೆಯರ್ ಚಾರ್ಜರ್ಸ್, ವಿಜಯನಗರ ಪೇಟ್ರಿಯಾಟ್ಸ್ ಸೇರಿದಂತೆ ಆರು ತಂಡಗಳು ಭಾಗವಹಿಸಿದ್ದವು. ಸ್ಯಾಂಡಲ್ವುಡ್ ತಾರೆಯರಾದ ಶಿವರಾಜಕುಮಾರ್, ಉಪೇಂದ್ರ, ಸುದೀಪ್, ಪುನೀತ್ ರಾಜ್ಕುಮಾರ್, ಯಶ್ ಮತ್ತು ಉಪೇಂದ್ರ ಅವರು ತಮ್ಮ ತಮ್ಮ ಟೀಮ್ ಗಳಿಗೆ ಮಾರ್ಗದರ್ಶಕರಾಗಿದ್ದರು.
ಡಾಲಿ ಧನಂಜಯ್ ಪ್...
Rona's Hey Fakira lyrical video song rel...
ದೊಡ್ಡಹಟ್ಟಿ ಬೋರ...
'O My Love' hits the screens this week
ಯದಾ ಯದಾ ಹಿ ಮೋಷನ...
Puneeth-Prabhudeva 'Luckyman' in screens...
ಅದ್ದೂರಿಯಾಗಿ ರಿ...
'Rakshasaru' hits theaters in August
ಭಾರಿ ಮೊತ್ತಕ್ಕೆ...
Hide and Seek starts shoot