ತಬಲಾ ನಾಣಿ ಮತ್ತು ಕುರಿ ಪ್ರತಾಪ್ ನಟಿಸಿರುವ ‘ಆರ್ಸಿ ಬ್ರದರ್ಸ್’ ಮುಂದಿನ ವಾರ ಜನವರಿ 26ಕ್ಕೆ ಗಣರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ. ಕಾಮಿಡಿ, ಸೆಂಟಿಮೆಂಟ್ ಮತ್ತು ಎಮೋಷನ್ಸ್ ಒಳಗೊಂಡ ಈ ಚಿತ್ರವು ಕರ್ನಾಟಕದಾದ್ಯಂತ 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು 50ಕ್ಕೂ ಹೆಚ್ಚು ಚಿತ್ರಮಂದಿರಗಳು ಬುಧವಾರದೊಳಗೆ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ವಿತರಕರು ತೊಡಗಿದ್ದಾರೆ. ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಘೋಷಿಸಿದರು. ನವ ನಿರ್ದೇಶಕ ಪ್ರಕಾಶ್ ಕುಮಾರ್ ಅವರಿಗೆ ಇದು ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಈ ಮೊದಲು ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಆರ್ಸಿ ಬ್ರದರ್ಸ್ ಚಲನಚಿತ್ರವನ್ನು ಅನುಗ್ರಹ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವೃತ್ತಿಯಲ್ಲಿ ವಕೀಲರಾದ ಮಣಿ ಶಶಾಂಕ್ ಹಾಗು ಸಹನಾ ಗಿರೀಶ್ ನಿರ್ಮಾಣ ಮಾಡಿದ್ದಾರೆ. ಕಿರಣ್ ಕುಮಾರ್ ಕ್ಯಾಮೆರಾ, ಪ್ರದೀಪ್ ವರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ನಾಯಕ ನಟ ತಬಲಾ ನಾಣಿ ಅವರು ಜೀವನ ಸಂಗಾತಿಯನ್ನು ಹುಡುಕುವ ಬ್ರಹ್ಮಚಾರಿ ಸಹೋದರನ ಪಾತ್ರದಲ್ಲಿ ನಟಿಸಿದ್ದಾರೆ. ವಯಸ್ಸು ಮೀರಿದಾಗ ಹುಡುಗಿ ಸಿಗೋದ ಕಷ್ಟ, ಮದುವೆ ಮಾಡುವುದು ತುಂಬಾ ಕಷ್ಟ ಎಂದು ಅವರು ಹೇಳಿದರು. ಈ ಚಿತ್ರದಲ್ಲಿ ತನ್ನ ಇಡೀ ಜೀವನವನ್ನು ಕಿರಿಯ ಸಹೋದರನನ್ನು (ಕುರಿ ಪ್ರತಾಪ್) ಬೆಳೆಸುವುದರಲ್ಲಿ ಕಳೆದು ಹೋಗುತ್ತದೆ. ಆದರೆ ಅವನ ಮದುವೆಗೆ ಬಂದಾಗ, ಅವನು ಎದುರಿಸುವ ಹಂತಗಳು ಚಿತ್ರದ ಕಥಾವಸ್ತು ಎಂದರು.
ಕುರಿ ಪ್ರತಾಪ್, ತಬಲಾ ನಾಣಿ, ನಯನಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸಾಲ ಸಾಲು ರಜಾ ದಿನಗಳು ಇರುವುದರಿಂದ ಇದೆ ಜನವರಿ 26ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಕಾಮಿಡಿಯಲ್ಲಿ ಸವಾ ಸೇರು ಎನ್ನುವಂತೆ ತಬಲಾ ನಾಣಿ ಮತ್ತು ಕುರಿ ಪ್ರತಾಪ್ ಅಭಿನಯಿಸಿದ್ದರೇನೋ ಎಂದು ಈ ಚಿತ್ರದ ಟ್ರೈಲರ್ ನೋಡಿದವರಿಗೆ ಭಾವಿಸದೆ ಇರದು.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...