ಬಿ.ಜೆ.ಪಿ ಶಾಸಕ, ಚಿತ್ರ ನಿರ್ಮಾಪಕ ಮುನಿರತ್ನ ಕೆಲವು ದಿನಗಳ ಹಿಂದೆ ಉರಿಗೌಡ ನಂಜೇಗೌಡ ಎನ್ನುವ ಶೀರ್ಷಿಕೆಯನ್ನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಾಯಿಸಿ ಆ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಚಿತ್ರದ ಪೋಸ್ಟರ್ ಡಿಸೈನ್ ಬಿಡುಗಡೆ ಮಾಡಿ ಮೇ ತಿಂಗಳಲ್ಲಿ ಉರಿಗೌಡ ನಂಜೇ ಗೌಡ ಚಿತ್ರದ ಶೂಟಿಂಗ್ ಆರಂಭಗೊಳ್ಳುವುದು ಎಂದು ಹೇಳಿಕೆ ಕೊಟ್ಟಿದ್ದರು. ಮುನಿರತ್ನ ಅವರ ಈ ನಡೆಗೆ ಚಿತ್ರೋಧ್ಯಮದಲ್ಲೂ ಪರ – ವಿರೋಧ ಅಭಿಪ್ರಾಯಗಳು ಕೇಳಿಬಂದವು.
ಈ ಬೆಳವಣಿಗೆಗಳ ಬೆನ್ನಲ್ಲೇ ಒಕ್ಕಲಿಗ ಸಮುದಾಯದಿಂದ.. ಮುನಿರತ್ನ ಈ ಹೆಸರಿನ ಸಿನಿಮಾ ಮಾಡಬಾರದು, ಇದರಿಂದ ಕಾಲ್ಪನಿಕ ವ್ಯಕ್ತಿಗಳನ್ನು ಒಕ್ಕಲಿಗರು ಎಂದು ಬಿಂಬಿಸಿ ಒಕ್ಕಲಿಗರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಪ್ರತಿಭಟಿಸಿದರು. ಒಕ್ಕಲಿಗರ ಸಂಘವು…. ಈ ಸಿನಿಮಾ ಕೈ ಬಿಡದಿದ್ದರೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ನಿರ್ಮಾಲಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಬಾರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಹಲವು ದಿನಗಳಿಂದ ಇದರ ಬಗ್ಗೆ ಪರ ವಿರೋಧ ಹೇಳಿಕೆಗಳು ಹೆಚ್ಚಾದ ಬೆನ್ನಲ್ಲೇ ಈ ವಿಷಯದ ಸಲುವಾಗಿ ನಿರ್ಮಲಾನಂದ ಶ್ರೀಗಳು.. ಮುನಿರತ್ನ ಅವರನ್ನು ಇಂದು ಬೆಂಗಳೂರಿನ ಶಾಖಾ ಮಠಕ್ಕೆ ಕರೆಸಿ ಸುದೀರ್ಘ ಚರ್ಚೆ ನಡೆಸಿದರು. ಮುನಿರತ್ನ ಅವರೊಂದಿಗೆ ಮಾತುಕತೆ ನಡೆಸಿದ ಶ್ರೀಗಳು “ನೈಜ್ಯತೆ ಇದ್ದರೆ ಸಿನಿಮಾ ಮುಂದುವರೆಸಿ.. ಇದರ ಬಗ್ಗೆ ಸಾಕಷ್ಟು ಗೊಂದಲ ಇರುವಾಗ ಸಿನಿಮಾ ಮಾಡುವುದು ಸೂಕ್ತ ಅಲ್ಲ” ಎಂದು ಸಲಹೆ ನೀಡಿದರು ಎನ್ನಲಾಗಿದೆ. ಜೊತೆಗೆ ಬಿಜೆಪಿ ಮುಖಂಡರಿಗೆ ಕರೆ ಮಾಡಿ ಸುಮ್ಮನೆ ಗೊಂದಲ ಸೃಷ್ಠಿಸಬೇಡಿ ಎಂದು ಶ್ರೀಗಳು ಕಿವಿಮಾತು ಹೇಳಿದ್ದಾರೆ.
ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುನಿರತ್ನ “ನಾನು ಸಿನಿಮಾ ನಿರ್ಮಾಪಕ, 25 ವರ್ಷಗಳಿಂದ ಸಿನಿಮಾಗಳನ್ನ ಮಾಡುತ್ತಿದ್ದೇನೆ. ಒಬ್ಬ ನಿರ್ಮಾಪಕನಾಗಿ ಬೇರೆ ಕಥೆ ಹುಡುಕೊಳ್ತೀನಿ. ಇನ್ನು ಮುಂದೆ ಈ ಸಿನಿಮಾನ ಮಾಡೋದಾಗ್ಲಿ ಚರ್ಚೆ ಮಾಡೋದಾಗ್ಲಿ ಯಾವುದು ಸಹ ಇರುವುದಿಲ್ಲ. ಹಾಗಾಗಿ ಇವತ್ತು ನಾನು ಇದನ್ನ ಮುಂದುವರೆಸದೆ ಇಲ್ಲಿಗೆ ಕೈ ಬಿಟ್ಟಿದ್ದೇನೆ” ಎಂದು ತಿಳಿಸಿದರು.
ಸದ್ಯಕ್ಕೆ ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿರುವ ಮುನಿರತ್ನ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಲ್ಲಿಸಿದ್ದ ಶೇರ್ಷಿಕೆ ನೊಂದಣಿ ಅರ್ಜಿಯನ್ನು ಹಿಂಪಡೆಯುತ್ತಾರಾ ಎನ್ನುವುದು ಕಾದು ನೋಡಬೇಕು.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...