ಸದ್ಯ ಸ್ಯಾಂಡಲ್ ವುಡ್ ನಲ್ಲಿ ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ಈಗ ’ನೋಡದ ಪುಟಗಳು’ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ’ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲೀಷ್ನಲ್ಲಿ ಅಡಿಬರಹವಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮತ್ತು ಹಿರಿಯ ನಟ ಡಿಂಗ್ರಿ ನಾಗರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ನವ ಪ್ರತಿಭೆ ಎಸ್.ವಸಂತ್ ಕುಮಾರ್ ಸಿನಿಮಾಕ್ಕೆ ರಚನೆ, ನಿರ್ದೇಶನ ಹಾಗೂ ‘ಸ್ವೀಟ್ ಅಂಡ್ ಸಾಲ್ಟ್’ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತ: ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್ನ್ನು ಕಲಿತುಕೊಂಡು, ಕೂಡ್ಲು ರಾಮಕೃಷ್ಣ, ಯೋಗಿ ಅಭಿನಯದ ‘ಯಕ್ಷ’ ಚಿತ್ರಕ್ಕೆ ಸಹಾಯಕನಾಗಿ ಅನುಭವ ಪಡೆದುಕೊಂಡಿದ್ದಾರೆ. ನಂತರ ಕಿರುಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದಾರೆ.
Also read :: ‘Nodadha Putagalu’ a dream of techie turned director Vasanth Kumar
ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕರು ‘ಪ್ರತಿವರ್ಷ ನಿರ್ದಿಷ್ಟ ಅವಧಿಯಲ್ಲಿ ಒಂದಷ್ಟು ಘಟನೆಗಳು ಜರುಗುತ್ತಿರುತ್ತವೆ. ಮುಂದೆ ಇದರ ಆಧಾರದ ಮೇಲೆ ಸಣ್ಣ ಏಳೆಯನ್ನು ಬರೆದುಕೊಂಡು ಗೆಳೆಯನಿಗೆ ಹೇಳಿದೆ. ಚೆನ್ನಾಗಿದೆ ಏಕೆ ಸಿನಿಮಾ ಮಾಡಬಾರದೆಂದು ಸಲಹೆ ನೀಡಿದರು. ಆತನ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಕಲಾವಿದರಿಗೆ ಕಥೆ ಹೇಳದೆ ಕುತೂಹಲ ಕಾಯ್ದಿರಿಸಲಾಗಿದೆ. ಚಿತ್ರದಲ್ಲಿ ನಾಲ್ಕು ವಯೋಮಾನದವರ ಸನ್ನಿವೇಶಗಳು ಬಂದು ಹೋಗುತ್ತದೆ. ಎಲ್ಲವು ಸೇರಿದರೆ ಕ್ಲೈಮಾಕ್ಸ್ ಆಗುತ್ತದೆ. ಆದರೆ ಒಬ್ಬರಿಗೊಬ್ಬರು ಭೇಟಿ ಆಗುವುದಿಲ್ಲ. ಎಲ್ಲರ ಬದುಕಿನಲ್ಲಿ ಕೆಟ್ಟ ಸಮಯ ಬಂದೇ ಬರುತ್ತೆ. ಅದು ನಮ್ಮನ್ನು ಹತೋಟಿಯಲ್ಲಿಡುತ್ತದೆ. ಇಲ್ಲದೆ ಹೋದಲ್ಲಿ ನಾವು ಹತೋಟಿಯಲ್ಲಿಟ್ಟುಕೊಳ್ಳಬೇಕು. ಇದನ್ನೆ ಚಿತ್ರದಲ್ಲಿ ಹೇಳಲಿಕ್ಕೆ ಹೊರಟಿದ್ದೇನೆಂದು’ ಸಣ್ಣ ಸುಳಿವನ್ನು ಬಿಟ್ಟುಕೊಟ್ಟರು. ನಾಯಕ ಪ್ರೀತಂ ಮಕ್ಕಿಹಳ್ಳಿ, ನಾಯಕಿ ಕಾವ್ಯ ರಮೇಶ್ ಇಬ್ಬರಿಗೂ ಎರಡನೇ ಅವಕಾಶ. ಉಳಿದಂತೆ ವಾಸು, ವಿಲಾಸ್ ಕುಲಕರ್ಣಿ, ಗೌತಂ.ಜಿ, ಅಶೋಕ್ ರಾವ್, ಪಿ.ಬಿ.ರಾಜು ನಾಯಕ, ಶಾಂತಿ.ಎಸ್.ಗೌಡ, ಮೋಹನ್ ಕುಮಾರ್, ರಘು ಶ್ರೀವತ್ಸ, ಅಮೃತೇಶ್, ರೇಣುಕ ಗೌಡ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್ ಗೊಣಕಿ-ಸಿ.ರಘುನಾಥ್ ಸಾಹಿತ್ಯದ ಹಾಡುಗಳಿಗೆ ವಿಘ್ನೇಶ್ ಮೆನನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಕುಮಾರ್ ಎನ್. ಛಾಯಾಗ್ರಹಣ, ರಘುನಾಥ ಎಂ. ಸಂಕಲನವಿದೆ. ಅಂದಂಗೆ ಹೆಸರಘಟ್ಟ, ಬೆಂಗಳೂರು ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ.
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...
ಮರಳಿ ಬರಲಿದೆಯಾ ...
Bangalore Boys - hero first-look poster ...
ಪೆಂಟಗಾನ್ ವಿರುದ...
'Driver Jamuna' trailer released by Kish...
ಅದ್ದೂರಿಯಾಗಿ ನಡ...
Dhananjay's Jamaligudda posters revealed