ದೊಡ್ಡಬಳ್ಳಾಪರ ನಾಗೇಶ್ ಉರುಫ್ ಡಿ ಸಿ ನಾಗೇಶ್ ಹುಟ್ಟು ಹಬ್ಬವೂ ಇಂದು.. ಅವರು ನಮ್ಮನ್ನ ಆಗಲಿ ಒಂದು ವರ್ಷವಾದ ದಿನವೂ ಇಂದು. ಸಿನಿಮಾ ಪತ್ರಕರ್ತರ ಅಚ್ಚು ಮೆಚ್ಚಿನ ಗೆಳೆಯರಾಗಿದ್ದ ನಾಗೇಶ್ ಅವರು ನಮ್ಮನ್ನ ಆಗಲಿ ವರ್ಷವಾದರೂ ಇಂದಿಗೂ ಅವರ ನೆನಪು ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವರಿಗೆ ಅಮರ. ಅಜಾತ ಶತ್ರು ವಾಗಿದ್ದ ನಾಗೇಶ್ ಎಲ್ಲರೊಡನೆ ಸ್ನೇಹಜೀವಿ – ದೊಡ್ಡವರೊಂದಿಗೆ ದೊಡ್ಡವರಾಗಿ, ಚಿಕ್ಕವರೊಂದಿಗೆ ಚಿಕ್ಕವರಾಗಿ ಎಲ್ಲರಿಗು ಹತ್ತಿರವಾಗಿದ್ದರು. ಮಾಧ್ಯಮ ಲೋಕದಲ್ಲಿ ಛಾಯಾಗ್ರಾಹಕರಾಗಿ ಬರುವ ಯುವಕರಿಗೆ ಗುರುವಾಗಿ ಗುರುತಿಸಿಕೊಂಡವರು.
ನಾಗೇಶ್ ಅವರ ನೆನಪಿನಲ್ಲಿ ಅವರೊಂದಿಗೆ ಒಡನಾಟವಿದ್ದ ಸಿನಿಮಾ ಪತ್ರಕರ್ತರು ಅವರ ಬಗ್ಗೆ ಒಂದು ಕೃತಿ ತರುವ ಮೂಲಕ ಹಿರಿಯ ಛಾಯಾಚಿತ್ರಗ್ರಾಹಕರನ್ನು ಸ್ಮರಿಸಿದರು. ಕರ್ನಾಟಕ ಚಲನಚಿತ್ರ ಸಂಘದ ವತಿಯಿಂದ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ಮಾಧ್ಯಮದವರು, ಚಿತ್ರರಂಗದ ಗಣ್ಯರು, ಪ್ರಚಾರಕರ್ತರು ಹಾಗು ಡಿ ಸಿ ನಾಗೇಶ್ ಕುಟುಂಬದವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಟ ನಿರ್ದೇಶಕ ಟಿ ಎಸ್ ನಾಗಾಭರಣ ನಡೆಸಿಕೊಟ್ಟು ಡಿ ಸಿ ನಾಗೇಶ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ ಕಾರ್ಯಕ್ರಮಗಳಲ್ಲಿ ಅವರು ಹೊಂದಿಸಿ ಕೊಡುತ್ತಿದ್ದ ಫೋಟೋಗಳು, ಅವರ ಕಾರ್ಯದಕ್ಷತೆಯ ಬಗ್ಗೆ ವಿವರಿಸಿದರು.
ನಟಿ ಭಾವನಾ, ಹಿರಿಯ ನಟ ದೇವರಾಜ್, ಬೆಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷರು ಶ್ರೀಧರ್ ಹಾಗು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷರು ಬಾ ನಾ ಸುಬ್ರಮಣ್ಯ ಅವರು ಡಿ. ಸಿ, ನಾಗೇಶ್ ಅವರ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಬಿಡುಗಡೆಗೊಂಡ “ಜೀವ ಬಿಂಬ – ಡಿ ಸಿ ನಾಗೇಶ್ ನೆನಪು” ಪುಸ್ತಕದ ಮೊದಲ ಪ್ರತಿಯನ್ನು ನಾಗೇಶ್ ಅವರ ಕುಟುಂಬಸ್ಥರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಚಲನಚಿತ್ರ ಪತ್ರಕರ್ತರ ಸಂಘದ ಜಾಲತಾಣವನ್ನು ನಟ ದೇವರಾಜ್ ಉದ್ಘಾಟಿಸಿ ನೂತನ ಸಂಘಕ್ಕೆ ಶುಭ ಹಾರೈಸಿದರು.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...