ಸದಭಿರುಚಿಯ ಕಥೆಗಳಿಗೆ ಹೆಸರಾಗಿರುವ ಸುವರ್ಣ ವಾಹಿನಿಯಲ್ಲಿ ಮತ್ತೊಂದು ಕಥೆ ಶುರುವಾಗಲಿದೆ. ಹಳ್ಳಿ ಸೊಗಡಿನ ಕಥೆ ಸಾರುವ – ಮನೆ ಮಗಳು ರಾಣಿ ಹಾಗು ಅವಳ ಪ್ರೀತಿಯ ಚೆರ್ರಿ (ಕುರಿಮರಿ) ಇಂದಿನಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ 6:30ಕ್ಕೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಬರ್ತಿದ್ದಾರೆ. ಬಾನಿಜೆ ಪ್ರೋಡಕ್ಷನ್ ಜೊತೆಗೂಡಿ ಖ್ಯಾತ ನಿರ್ದೇಶಕ ರಾಂಜಿ (ಗಗನ ಎಂಟರ್ ಪ್ರೈಸಸ್) ಅವರು ಈ ಧಾರಾವಾಹಿಯನ್ನು ನಿರ್ಮಿಸಿದ್ದಾರೆ.
ಹಳ್ಳಿಯಲ್ಲಿ ವಾಸಿಸುವ ಒಬ್ಬ ಮುದ್ದಾದ ಹುಡುಗಿಯ ಸುತ್ತ ಹಣೆದಿರುವು ಈ ಕಥೆಯಲ್ಲಿ ಬಾಲ್ಯದಲ್ಲಿ ಆಕೆ ತನ್ನ ತಾಯಿ ಹಾಗು ಸಹೋದರನನ್ನು ಅಫಘಾತವೊಂದರಲ್ಲಿ ಕಳೆದುಕೊಳ್ಳುತ್ತಾಳೆ. ಈ ಆಘಾತದಲ್ಲಿ ಆಕೆ ಶ್ರವಣ ದೋಷವನ್ನು ಹೊಂದುತ್ತಾಳೆ. ಸೇಡಿಗಾಗಿ ತನ್ನ ಈ ಸ್ಥಿತಿಗೆ ಕಾರಣರಾದ ಅಪಘಾತ ಉಂಟು ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿ ಇರುತ್ತಾಳೆ. ಆದರೆ ವಿಧಿಯಾಟವೇ ಬೇರೆ, ಯಾರು ತನ್ನ ತಾಯಿ ತಮ್ಮನ್ನ ಸಾವಿಗೆ ಕಾರಣರಾದನೋ, ಆತನ ಗೆಳೆತನವಾಗುತ್ತದೆ. ಈ ಮದ್ಯೆ ಆತನ ತಾಯಿಯ ವಿರುದ್ಧ ಅನಿರೀಕ್ಷತ ಬೆಳವಣಿಗೆಗಳನ್ನು ಎದುರಿಸುತ್ತಾಳೆ. ಇನ್ನುಳಿದ ಕಥೆ ಸುಂದರ ಕಂತುಗಳಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಪ್ರಮುಖ ತಾರಾಗಣದಲ್ಲಿ ರಾಣಿಯ ಪಾತ್ರದಲ್ಲಿ ಚಂದನ ಎಂ ರಾವ್ ಕಾಣಿಸಿಕೊಳ್ಳಲಿದ್ದು, ಪ್ರವೀಣ್ ಅಥರ್ವ ಜೋಡಿಯಾಗಿ ಅಭಿನಯಿಸಿದ್ದಾರೆ.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...