ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಎಂದಿನಂತೆ ತಮ್ಮ ಕನ್ನಡಪರ ಹೋರಾಟಗಳಲ್ಲಿ ತೊಡಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಪೆಂಟಗಾನ್ ಟೀಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು. ಟೀಸರ್ ನಲ್ಲಿ ಬಂದ ಒಂದು ಪದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಗುರು ದೇಶಪಾಂಡೆ ಹಾಗು ಇತರ ನಾಲ್ಕು ನಿರ್ದೇಶಕರು ಒಟ್ಟ್ಟಾಗಿ ನಿರ್ದೇಶಿಸಿರುವ ಪೆಂಟಗಾನ್ ಚಿತ್ರದಲ್ಲಿ ಕನ್ನಡಿಗರಿಗೆ ಅವಮಾನವಾಗುವಂತೆ ಹೋರಾಟಗಾರರನ್ನು ರೋಲ್ ಕಾಲ್ ಗಿರಾಕಿಗಳು ಎಂಬ ಸಂಭಾಷಣೆ ಬರುತ್ತದೆ. ಈ ಪದಬಳಕೆಯ ವಿರುದ್ಧ ಅಕ್ರೋಷಗೊಂಡ ರಾಜಣ್ಣ ಕೂಡಲೇ ಈ ಪದವನ್ನು ಚಿತ್ರದಿಂದ ತಗೆಯಬೇಕು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಹೋರಾಟಗಾರ್ತಿ, ನಟಿ ಅಶ್ವಿನಿ ಗೌಡ ಸಹ ರಾಜಣ್ಣ ಮಾತಿಗೆ ಧ್ವನಿಗೂಡಿಸಿ ಈ ಪದ ಬಳಕೆ ಕನ್ನಡ ಪರ ಹೋರಾಟಗಾರನ್ನು ಅವಮಾನಿಸಿದ್ದಂತೆ ಎಂದಿದ್ದಾರೆ. ಪೆಂಟಗಾನ್ ಚಿತ್ರದಲ್ಲಿ ಕಿಶೋರ್, ಪೃಥ್ವಿ ಅಂಬರ್ ಮುಂತಾದವರು ಅಭಿನಯಿಸಿದ್ದಾರೆ.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...