ಭಾರತ ಚಿತ್ರರಂಗದ ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾದ ಶ್ರೀಮತಿ ವಾಣಿ ಜಯರಾಮ್ ಇಂದು (ಫೆ.೪) ಚೆನ್ನೈ ನ ಅವರ ನಿವಾಸದಲ್ಲಿ ನಿಧನರಾದರು. ಇದಕ್ಕೂ ಮುನ್ನಾ ದಿನ ತೆಲುಗು ಚಿತ್ರರಂಗದ ಮೇರು ಪರ್ವ ಹಿರಿಯ ನಟ ವಿಶ್ವನಾಥ್ ಕಳೆದುಕೊಂಡ ಚಿತ್ರರಂಗ ಇದರ ಬೆನ್ನಲ್ಲೇ ಹಿರಿಯ ಗಾಯಕಿಯನ್ನು ಕಳೆದುಕೊಂಡಿರುವುದು ಅಭಿಮಾನಿ ಬಳಗದಲ್ಲಿ ಅತೀವ ದುಃಖ ತಂದಿದೆ.
70, 80, 90ರ ದಶಕದಲ್ಲಿನ ಚಿತ್ರಗಳ ಹಾಡು ಇಂದಿಗೂ ಎವರ್ಗ್ರೀನ್, ಪ್ರತಿ ದಿನವೂ ಅಂದಿನ ಹಾಡುಗಳು ಇವತ್ತಿಗೂ ರೇಡಿಯೋ ಮ್ಯೂಸಿಕ್ ಚಾನೆಲ್ ಅಲ್ಲಿ ಗುಣುಗುಣುತ್ತಿದೆ. ಇಂತಹ ಜನಪ್ರಿಯ ಹಾಡುಗಳಿಗೆ ಧ್ವನಿಗೂಡಿಸಿದ್ದ ವಾಣಿ ಜಯರಾಮ್ ಅವರ ಕೊಡುಗೆ ಸಂಗೀತ ಲೋಕಕ್ಕೆ ಅಪಾರ.
ಬಾಲಿವುಡ್ ನ ಗುದ್ದಿ ಚಿತ್ರದ ಮೂಲಕ ಹಿನ್ನಲೆ ಗಾಯಕಿಯಾಗಿ ಎಂಟ್ರಿ ಕೊಟ್ಟ ವಾಣಿ ಜಯರಾಮ್ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾರತೀಯ ಭಾಷೆಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲೇ ಸರಿಸುಮಾರು 650ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಇವರು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಜೊತೆ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.
ಹಲವು ಪ್ರಶಂಶೆ ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ ಚಿತ್ರರಂಗದಲ್ಲಿನ ಅಪಾರ ಕೊಡುಗೆಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ೨೦೧೮ ರಲ್ಲಿ ತಮ್ಮ ಪತಿ ಜಯರಾಮ್ ಅವರನ್ನು ಕಳೆದುಕೊಂಡ ವಾಣಿ ಜಯರಾಮ್ ಒಬ್ಬರೇ ಚೆನ್ನೈ ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದರು.
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...