ಯುವ ಪ್ರತಿಭೆಗಳು ತಮ್ಮನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿ ಕಿರುಚಿತ್ರಗಳು ಹಾಗೂ ಅಲ್ಬಮ್ ಸಾಂಗ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಾಲಿಗೆ ಯುವ ಪ್ರತಿಭೆ ರಜತ್ ರಜನಿಕಾಂತ್ ಸೇರಿದ್ದಾರೆ. ಹೌದು ಸಿನಿಮಾ ಮಾಡುವ ಕನಸನ್ನು ಹೊತ್ತು ಇಂಡಸ್ಟ್ರಿಗೆ ಬಂದಿರುವ ಇವರು ಮೊದಲ ಪ್ರಯತ್ನವಾಗಿ ‘ದ ಸರ್ವೈವರ್’ ಎಂಬ ಕಿರುಚಿತ್ರವನ್ನು ಸಿದ್ದಪಡಿಸಿದ್ದಾರೆ. ಈ ಚಿತ್ರಕ್ಕೆ ರಜತ್ ರಜನಿಕಾಂತ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಕಲನ, ನಿರ್ದೇಶನದ ಜೊತೆಗೆ ನಾಯಕರಾಗಿ ನಟಿಸಿದ್ದಾರೆ. ಅಲ್ಲದೆ ರಜತ್ ಚಿತ್ರದ ಸಹ ನಿರ್ಮಾಪಕರು ಹೌದು. ಮೂಲತಃ ಇಂಗ್ಲೀಷ್ ನಲ್ಲಿ ತಯಾರಾದ ಈ ಚಿತ್ರ ಕನ್ನಡ, ಹಿಂದಿ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಮೊನ್ನೇಯಷ್ಟೇ ಮೂರು ಭಾಷೆಯಲ್ಲಿ ಟ್ರೇಲರ್ ಬಿಡುಗಡೆಯಾಯಿತು. ಆ್ಯಕ್ಷನ್, ಥ್ರಿಲ್ಲರ್ ನಿಂದ ಕೂಡಿರುವ ಟ್ರೇಲರ್ ಸಖತ್ ಕುತೂಹಲ ಮೂಡಿಸಿದ್ದು, ಹಾಲಿವುಡ್ ಸಿನಿಮಾ ಮಾದರಿಯಲ್ಲಿ ಸ್ಟ್ರಾಂಗ್ ಆಗಿದೆ. ಹೌದು ಯಾವ ಕಮರ್ಷಿಯಲ್ ಸಿನಿಮಾಗೆ ಕಡಿಮೆ ಇಲ್ಲದಂತೆ ಟ್ರೇಲರ್ ತಯಾರಾಗಿದೆ. ಎ2 ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದ್ದು, ಸದ್ಯದಲ್ಲೇ ಈ ಕಿರುಚಿತ್ರ ಒಟಿಟಿ ಸೇರಿದಂತೆ ಖಾಸಗಿ ವಾಹಿನಿಗಳಲ್ಲಿ ಬಿಡುಗಡೆ ಆಗಲಿದೆಯಂತೆ. ಕನ್ನಡ ವರ್ಷನ್ ನ ಟ್ರೇಲರ್ ಬಿಡುಗಡೆ ಮಾಡಿದ ಛಾಯಾಗ್ರಾಹಕ ಅಶೋಕ ಕಶ್ಯಪ್ ‘ಈ ಟೈಟಲ್ ಕೇಳಿದಾಗ ಹಾಲಿವುಡ್ ಸಿನಿಮಾ ನೆನಪಿಗೆ ಬಂತು. ಆ್ಯಕ್ಷನ್ ಚನ್ನಾಗಿ ಬಂದಿದ್ದು, ಟ್ರೇಲರ್ ನೋಡಿದಾಗ ಶಾರ್ಟ್ ಫಿಲ್ಮ ಅನಿಸಲ್ಲ. ಇಂದು ಹೊಸತನದ ಸಿನಿಮಾಗಳು ಗೆಲ್ಲತಾ ಇದ್ದು, ಈ ಕಿರುಚಿತ್ರದ ಮೆಕಿಂಗ್ ಚನ್ನಾಗಿದೆ. ನಂಗೆ ಇದು ವೀದೇಶಿ ಸಿನಿಮಾ ನೋಡಿದ ಫಿಲ್ ಆಯ್ತು’ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಸೂತ್ರಧಾರಿ ರಜತ್ ರಜನಿಕಾಂತ್ ‘ಇದು ನನ್ನ ಮೊದಲ ಪ್ರಯತ್ನ. ಒಂದುವರೆ ವರ್ಷದ ಶ್ರಮವಿದೆ. ಚಿತ್ರವನ್ನು ನಾನೇ ಎಡಿಟ್ ಮಾಡಿದ್ದರಿಂದ ದ್ದು, 60-70 ಸಲ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ತಯಾರಾಗಲು ತಂಡ ತುಂಬಾ ಸಪೋರ್ಟ್ ಮಾಡಿದೆ. ನಮ್ಮ ಟ್ಯಾಲೆಂಟ್ ಚಿತ್ರರಂಗದವರಿಗೆ, ಜನರಿಗೆ ತೋರಿಸಲು ಈ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು. ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಸೂರಜ್ ‘ಒಳ್ಳೆ ಪ್ರಯತ್ನದಿಂದ ರಜತ್ ಇದನ್ನು ಮಾಡಿದ್ದಾನೆ. ಅವನದೇ ಕಥೆಗೆ ಅವನೇ ಹಣ ಹಾಕಿದ್ದು ನಿಮ್ಮಗಳ ಸಹಕಾರವಿರಲಿ’ ಎಂದರು. ಸಿನಿಮಾ ನಿರ್ಮಾಪಕ ಜಸ್ಟಿನ್ ಸಮುಲ ಜೇಮ್ಸ್ ಮಾತನಾಡಿ ‘ಇದು ನಮ್ಮ ಬ್ಯಾನರ್ ನ ಮೊದಲ ಶಾರ್ಟ್ ಫಿಲ್ಮ. ಇದು ಸದ್ಯದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ನಾನು ತಂಡಕ್ಕೆ ಸಹಾಯ ಅಷ್ಟೇ ಮಾಡಿದ್ದೇನೆ. ಒಳ್ಳೆ ಪ್ರಯತ್ನದಿಂದ ಸುಂದರವಾಗಿ ಸಿನಿಮಾ ಬಂದಿದೆ’ ಎನ್ನುವರು. ಇದೇ ಸಂದರ್ಭದಲ್ಲಿ ಇಂಗ್ಲೀಷ್ ಟ್ರೇಲರ್ ಬಿಡುಗಡೆ ಮಾಡಿದ ವಿಕ್ರಮ್, ಹಿಂದಿ ಟ್ರೇಲರ್ ರಿಲೀಸ್ ಮಾಡಿದ ಡಿಸಿಪಿ ಶಿವಶಂಕರ ತಮ್ಮ ಅನುಭವ ಹಂಚಿಕೊಂಡರು.
Also Read : ‘Survivor’ on OTT – Trailer released in style
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...