ಸ್ಯಾಂಡಲ್ವುಡ್ ಬಾದ್ಶಾ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರವು ಜಗತ್ತಿನ ಅತ್ಯುತ್ತಮ ಪ್ರಸ್ತಸ್ಥಿಗಳಲ್ಲಿ ಒಂದಾದ 2023ರ “ಆಸ್ಕರ್” ಗೆ ನಾಮನಿರ್ದೇಶನಗಳ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಆಸ್ಕರ್ 2023 ರ ವಿಜೇತರನ್ನು ಈ ವರ್ಷದ ಮಾರ್ಚ್ 12 ರಂದು ನಡೆಯಲಿರುವ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತದೆ. ಜಾಕ್ ಮಂಜು ಅವರು ಅದ್ದೂರಿ ಬಜೆಟ್ನಲ್ಲಿ ನಿರ್ಮಿಸಿರುವ ವಿಕ್ರಾಂತ್ ರೋಣ ಜಗತ್ತಿನಾದ್ಯಂತ ನೂರಾರು ಸ್ಕ್ರೀನ್ಗಳಲ್ಲಿ 5ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಬುರ್ಜ್ ಖಲೀಫಾ ಟವರ್ಗಳಲ್ಲಿ ಟ್ರೇಲರ್ ಅಥವಾ ಫಸ್ಟ್ ಲುಕ್ ಅನ್ನು ಪ್ರದರ್ಶಿಸಿದ ಮೊಟ್ಟಮೊದಲ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆ ವಿಕ್ರಾಂತ್ ರೋಣ ಹೊಂದಿದೆ.
ಈ ಮಾರ್ಚ್ನಲ್ಲಿ ಜರುಗಲಿರುವ ಆಸ್ಕರ್ 2023ರ ಅರ್ಹ ಚಿತ್ರಗಳ ಪಟ್ಟಿಯಲ್ಲಿ ತಮ್ಮ ಚಿತ್ರ ಸ್ಥಾನ ಪಡೆದಿರುವುದು ಅತೀವ ಸಂತಸ ತಂದಿದೆ ಎಂದು ನಿರ್ದೇಶಕ ಅನುಪ್ ಭಂಡಾರಿ ಹೇಳಿದ್ದಾರೆ. ಈ ಹಿಂದೆ
2016ರಲ್ಲಿ ಅನುಪ್ ಅವರ ರಂಗಿತರಂಗ ಚಿತ್ರವೂ ಸಹ ಆಸ್ಕರ್ನ ಅರ್ಹ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
ವಿಕ್ರಾಂತ್ ರೋಣವನ್ನು ಹೊರತುಪಡಿಸಿ, ಮತ್ತೊಂದು ಕನ್ನಡ ಚಲನಚಿತ್ರ ಕಾಂತಾರ ಸಹ ಆಸ್ಕರ್ 2023 ರಲ್ಲಿ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಕಣದಲ್ಲಿದೆ.
Veda Krishnamurthy visits Hoysala film s...
ಮರಳಿ ಬರಲಿದೆಯಾ ...
Bangalore Boys - hero first-look poster ...
ಪೆಂಟಗಾನ್ ವಿರುದ...
'Driver Jamuna' trailer released by Kish...
ಅದ್ದೂರಿಯಾಗಿ ನಡ...
Dhananjay's Jamaligudda posters revealed
ಶ್ರುತಿ ತಂಗಿ ಮಗ...
'Shava Samskara' teaser released
ಬ್ರಷ್ಟಾಚಾರಿಗಳ ...