ಈ ಹಿಂದೆ ಲವ್ ಇನ್ ಲಾಕ್ ಡೌನ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಂಜುನಾಥ ಬಿ. ರಾಮ್ ಈಗ ಎಸ್. ನಿಜಲಿಂಗಪ್ಪ ಪೂಜಾರಿ ಗುರುಮಿಠ್ಕಲ್ ಜೊತೆಗೂಡಿ ತಮ್ಮ ಮತ್ತೊಂದು ಪ್ರಯತ್ನವಾಗಿ ಹೋರಾಟದ ಕಿಚ್ಚು ಹಚ್ಚುವ ಲಿರಿಕಲ್ ವಿಡಿಯೋ ಸಾಂಗ್ ವೊಂದನ್ನು ನಿರ್ಮಿಸಿದ್ದಾರೆ.
ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಾಗೂ ಶ್ರೀ ಕನ್ನಡಾಂಬೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹೋರಾಟದ ಗೀತೆ ಬಿಡುಗಡೆಯಾಗಿದ್ದು ಅದರ ಹೆಸರು ಯುದ್ದ. ಈಗಾಗಲೇ ಈ ಗೀತೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಹಾಡಿಗೆ ಡ್ಯಾನಿಯಲ್ ವಿ. ಕಮಟಂ ಅವರ ಸಂಗೀತ ಸಂಯೋಜನೆಯಿದ್ದು, ಚಂದ್ರು ಸಿರಾ ದನಿಯಾಗಿದ್ದಾರೆ.
“ಭ್ರಷ್ಟಾಚಾರದ ವಿರುದ್ಧ ನನ್ನ ಯುದ್ಧ “ಎಂಬ ಈ ಹೋರಾಟದ ಗೀತೆ ಇದಾಗಿದ್ದು, ಸದ್ಯದಲ್ಲೇ ಚುನಾವಣೆ ಬರುತ್ತಿರುವುದರಿಂದ ಈ ಸಮಯದಲ್ಲಿ ಜನ ಭ್ರಷ್ಟ ರಾಜಕಾರಣಿಗಳನ್ನು ಗುರುತಿಸಿ, ಅವರನ್ನು ಹೊರಗಿಡಬೇಕು ಎಂಬ ಸಂದೇಶವನ್ನು ಈ ಹಾಡಿನ ಮೂಲಕ ಜನರಿಗೆ ತಲುಪಿಸಬೇಕೆಂಬ ಉದ್ದೇಶ ಇಟ್ಟುಕೊಂಡು ಈ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ.
ಚುನಾವಣೆ ಸಮಯದಲ್ಲಿ ವೋಟಿಗೆ ನೋಟನ್ನು ಕೊಡುವ ಮೂಲಕ ಜನಸಾಮಾನ್ಯರನ್ನ ಭ್ರಷ್ಟಾಚಾರದ ಕೂಪದಲ್ಲಿ ನೂಕಲಾಗುತ್ತದೆ. ಈಗ ಜನರು ಅದರಿಂದ ಹೊರಬಂದು ತಮ್ಮದೇ ಆದ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಿಕೊಳ್ಳೋದಕ್ಕೆ ಇದು ಸರಿಯಾದ ಸಮಯ. ರಾಜಕೀಯ ಜಿದ್ದಾಜಿದ್ದಿಯ ನಡುವೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡು ಜನಸಾಮಾನ್ಯರ ಜೀವನ ಅಸ್ತವ್ಯವಸ್ಥೆಗೊಳ್ಳುತ್ತದೆ. ಈ ಎಲ್ಲ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಈ ಗೀತೆಯನ್ನು ಹೊರತರಲಾಗಿದೆ.
ಇನ್ನು ಇದೇ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಬಲಿ” ಸಿನಿಮಾದ ಫ್ರೀ ಪ್ರೀಪ್ರೊಡಕ್ಷನ್ ಕಾರ್ಯಗಳು ಮುಗಿದಿದ್ದು, ಲೊಕೇಶನ್ ಹಾಗೂ ಕಲಾವಿದರ ಹುಡುಕಾಟದಲ್ಲಿ ಚಿತ್ರತಂಡ ತೊಡಗಿಕೊಂಡಿದೆ.
Also Read : Yuddha – war against Corruption album released
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...
'ದಸರಾ' ಟೀಸರ್ ಬಿಡ...
ಮದುವೆಗೆ ಆಮಂತ್ರ...
ಗಾಯಕಿ ವಾಣಿ ಜಯರ...
ಸ್ವಾಮಿ ಸನ್ನಿಧಿ...
ಇಂದಿನಿಂದ ಸುವರ್...
Veda Krishnamurthy visits Hoysala film s...